Friday, July 17, 2009

PTC GUIDE

ಪ್ರೀತಿಯ ಕನ್ನಡಿಗರೇ...
ನಾನಿಲ್ಲಿ
ಪರಿಚಯಿಸುತ್ತಿರುವುದು PTC ಎಂಬ ಅಂತರ್ಜಾಲ ಉದ್ಯೋಗದ ಬಗ್ಗೆ. 'ಜಾಹಿರಾತುಗಳ ಮೇಲೆ ಕ್ಲಿಕ್ ಮಾಡಿ ಹಣ ಗಳಿಸುವುದು' ಎಂಬುದು ಉದ್ಯೋಗದ ವಿವರಣೆ. ವಿಧ್ಯಾರ್ಥಿಗಳು , ನಿರುಧ್ಯೋಗಿಗಳು , ಗ್ರಹಿಣಿಯರು , ನಿವ್ರತ್ತರು , ಹೀಗೆ ಎಲ್ಲರೂ ಮಾಡಬಹುದಾದಂತ ಸುಲಭ ಕೆಲಸವಿದು. ಮನೆಯಲ್ಲೇ ಕಂಪ್ಯೂಟರ್ ಹಾಗು ಇಂಟರ್ನೆಟ್ ಕನೆಕ್ಷೆನ್ ಇರುವವರಿಗೆ ಇದು ಉತ್ತಮ ಕೆಲಸ. Data entry, Form filling, Ad posting... ಇನ್ನು ಮುಂತಾದ ಆನ್ಲೈನ್ ಕೆಲಸಗಳನ್ನು ನೀವು ಈಗಾಗಲೇ ಮಾಡುತ್ತಿದ್ದರೆ ಅವನ್ನೆಲ್ಲ ಬಿಟ್ಟುಬಿಡಿ. ಇವೆಲ್ಲ ಹೆಚ್ಚು ಸಮಯ ತಿನ್ನುವುದರ ಜೊತೆಗೆ ಕಡಿಮೆ ಆದಾಯ ತಂದು ಕೊಡುತ್ತವೆ. ಜೊತೆಗೆ ಕೆಲವೊಮ್ಮೆ ಮಾಡಿದ ಕೆಲಸಕ್ಕೆ ಸಂಬಳ ಸಿಗದೇ ಮೋಸ ಹೋಗುವುದೂ ಉಂಟು. ನಾನಿಲ್ಲಿ ಪರಿಚಯಿಸುತ್ತಿರುವ PTR - PTR ನಲ್ಲೂ ಮೋಸ ಅಡಗಿದೆಯಾದರೂ, ಕರೆಕ್ಟಾಗಿ ಪೇಮೆಂಟ್ ಮಾಡುವಂತ ಸೈಟ್ ಗಳನ್ನಷ್ಟೇ ಆಯ್ದು ನಾನು ನಿಮಗೆ ಪರಿಚಯಿಸುತ್ತಿದ್ದೇನೆ { ಇವುಗಳಿಂದ ನಾನು ಈಗಾಗಲೇ ಹಣ ಪಡೆದಿದ್ದೇನೆ } ಜೊತೆಗೆ ಡಾಟಾ ಎಂಟ್ರಿ, ಫಾರಂ ಫಿಲ್ಲಿಂಗ್, ಸರ್ವೇ...ಮುಂತಾದ ಕೆಲಸಗಳನ್ನು ನೀವು ಮಾಡಬೇಕೆಂದರೆ 1 ಸಾವಿರದಿಂದ 6 ಸಾವಿರದ ವರೆಗೆ ಶುಲ್ಕ ಕಟ್ಟಬೇಕಾಗುತ್ತೆ. ಆದರೆ ನಾನು ಮಾಡುತ್ತಿರುವ ಕೆಲಸಕ್ಕೆ ನೀವು ಫ್ರೀ ಆಗಿ ಪ್ರವೇಶ ಪಡೆಯಬಹುದು. ಎಲ್ಲೂ ನೀವು ನಯ್ಯಾಪೈಸೆ ಹಣ ಭರಿಸಬೇಕಾಗಿಲ್ಲ.

ಪ್ರವೇಶ
:
ನೀವು http://www.ptc-ppc-ptr.blogspot.com ಹೋಗಿ ಮೊದಲು ಇಡೀ ಬ್ಲಾಗನ್ನು ಸರಿಯಾಗಿ ನೋಡಿ. ಅಲ್ಲಿ ಸುಮಾರು 60 ವೆಬ್ ಸೈಟ್ ಗಳ ಲಿಂಕ್ಸ್ ಇವೆ. ಎಲ್ಲ Genuine ವೆಬ್ ಸೈಟ್ ಳು. ಜೊತೆಗೆ ಎಲ್ಲ ಸೈಟ್ ಗಳ Click Rate ಗಳ ಬಗ್ಗೆ ಸಂಕ್ಷಿಪ್ತ ವಿವರಣೆಯಿದೆ. ಅವುಗಳಲ್ಲಿ ನಿಮಗೆ ಸರಿ ಎನಿಸಿದ ಒಂದಿಷ್ಟು ಸೈಟ್ ಗಳ ಪಟ್ಟಿ ಮಾಡಿ, ಅಲ್ಲಿರುವ ಬ್ಯಾನರ್ ಕ್ಲಿಕ್ ಮಾಡಿದರೆ ನೀವು ಸೀದಾ ವೆಬ್ ಸೈಟ್ ಗೆ ಪ್ರವೇಶ ಪಡೆಯುತ್ತೀರಿ. ಅಲ್ಲಿ Register ಅಥವಾ signup ಅಥವಾ Join ಕ್ಲಿಕ್ ಮಾಡಿ , ನಿಮ್ಮ ಹೆಸರು ವಿಳಾಸ -ಮೇಲ್ ID ಮುಂತಾದ ವಿವರಗಳನ್ನು ಭರ್ತಿ ಮಾಡಿ. Username ಮತ್ತು Password ಗಳನ್ನೂ ಮಾತ್ರ ನೀವು ಎಲ್ಲ ಸೈಟ್ ಗಳಿಗೆ ಒಂದೇ ಕೊಡಿ, ಅಂದರೆ ನಿಮಗೆ ನೆನಪಿಡಲು ಸುಲಭವಾಗುತ್ತೆ. ಕೆಲವೊಂದು ಸೈಟ್ ಗಳು -ಮೇಲ್ Confirmation ಕೇಳುತ್ತವೆ, ಆಗ ನೀವು ನಿಮ್ಮ -ಮೇಲ್ ಓಪನ್ ಮಾಡಿ ಅಲ್ಲಿ ಸೈಟ್ ನಿಂದ ಬದಿರುವ ಮೇಲ್ ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ ಉಳಿದ ವಿವರಗಳನ್ನು ಭರ್ತಿ ಮಾಡಿ. ನಂತರ ಲಾಗಿನ್ ಆಗಿ. ಯಾವುದಕ್ಕೂ ನೀವು Join ಆಗುವ ಎಲ್ಲ ಸೈಟ್ ಗಳ ವಿವರಗಳನ್ನು ಒಂದು Notepad ಅಥವಾ Wordpad ನಲ್ಲಿ ತುಂಬಿ ಇಡುವುದು ಒಳ್ಳೆಯದು.

ಆರಂಭ
:
ನಮ್ಮ ಮನೆಯಲ್ಲಿ ಇಬ್ಬರು ಇದೇ ಕೆಲಸವನ್ನು ಮಾಡುವುದರಿಂದ ನಾನು ಸುಮಾರು ೬೦ ಸೈಟ್ ಗಳಿಗೆ Join ಆಗಿದ್ದೇನೆ. ಆದರೆ ಪ್ರತಿದಿನ 60 ಸೈಟ್ ಗಳಿಗೆ Login ಆಗಿ ಅಲ್ಲಿರುವ Ads ಕ್ಲಿಕ್ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ನೀವು ಸುಮಾರು ೨೦ ರಿಂದ 30 ಸೈಟ್ ಗಳಿಗೆ ಮಾತ್ರ Join ಆಗಿ. Login ಆದ ಮೇಲೆ ಅಲ್ಲಿ ನಿಮಗೆ ನಿಮ್ಮ Account ಸಂಪೂರ್ಣ ವಿವರ ಸಿಗುತ್ತದೆ. ಅಲ್ಲಿಯೇ View Ads, Surf Ads, Paid to click, Click Links ಮುಂತಾದ Options ಗಳಿರುತ್ತವೆ. ಅವನ್ನು ಕ್ಲಿಕ್ ಮಾಡಿ ಅಲ್ಲಿ ಸೂಚಿಸಿರುವಂತೆ Ads,Links,Banner ಗಳನ್ನೂ ಕ್ಲಿಕ್ ಮಾಡಿ, ನಂತ ೩೦ ರಿಂದ ೬೦ ಸೆಕೆಂಡ್ ಕಾಯಿರಿ. ನೀವು ಕ್ಲಿಕ್ಕಿಸಿದ ಜಾಹಿರಾತು Approve ಆಯಿತು ಎಂಬುದಕ್ಕೆ OK ಅಥವಾ ಗ್ರೀನ್ ಸಿಗ್ನಲ್ { Arrow Mark } ಸಿಕ್ಕ ಮೇಲೆ ಪರದೆ ಕ್ಲೋಸ್ ಮಾಡಿ ಇನ್ನೊಂದು ಜಾಹಿರಾತು ಕ್ಲಿಕ್ ಮಾಡಿ. ಕೆಲವೊಂದು ಜಾಹಿರಾತು ಲೋಡ್ ಆಗಲು ಸ್ವಲ್ಪ ಸಮಯ ಹಿಡಿಯುತ್ತದೆ, ಆಗ ತಾಳ್ಮೆಯಿಂದ ಕಾಯಬೇಕು. ಒಟ್ಟಿನಲ್ಲಿ ಅಲ್ಲಿ ಇರುವ ಸೂಚನೆ Options ಗಳನ್ನು ಸರಿಯಾಗಿ ಓದಿ ಮುಂದುವರೆದರೆ ಕೆಲಸ ಸುಲಭ. ಇದಕ್ಕೆಲ್ಲ SSLC ಮಟ್ಟದ ಇಂಗ್ಲೀಷ್ ಸಾಕು.

ಲೆಕ್ಕಾಚಾರ : ನಾನಿಲ್ಲಿ 1 ಜಾಹಿರಾತಿಗೆ 1 Cent ನಿಂದ ಹಿಡಿದು 2 Cent ಕೊಡುವ ವೆಬ್ಸೈಟ್ ಗಳನ್ನು ಮಾತ್ರ ಆಯ್ದುಕೊಂಡಿದ್ದೇನೆ. { ಇದಕ್ಕಿಂತ ಹೆಚ್ಚಿಗೆ ಕೊಡುವ ಸೈಟ್ ಗಳಿವೆಯಾದರೂ ದುಡ್ಡು ಕರೆಕ್ಟಾಗಿ ಬರುವ ಗ್ಯಾರಂಟಿಯಿಲ್ಲ}. ನೀವು 1 ದಿನಕ್ಕೆ 1 ಸೈಟ್ ನಲ್ಲಿ 3 ರಿಂದ ೧೫ ಜಾಹಿರಾತು ಕ್ಲಿಕ್ ಮಾಡಬಹುದು. ಸರಾಸರಿಯಾಗಿ 1 ಸೈಟ್ ನಿಂದ ದಿನಕ್ಕೆ ೧೦ Cent ಗಳಿಸಿದಂತಾಗುತ್ತೆ. ಅಂದರೆ 10 ಸೈಟ್ ಗಳಿಂದ 1 ಡಾಲರ ಆಗುತ್ತದೆ. ೩೦ ಸೈಟ್ ಗೆ Join ಆಗಿದ್ದರೆ ದಿನಕ್ಕೆ 3 Dollar ಗಳಿಸಬಹುದು. { ೧೪೦ - ೧೫೦ ರೂಪಾಯಿ}. ನಾನಿಲ್ಲಿ ವಿವರಿಸುತ್ತಿರುವುದು ಕೇವಲ ನೀವು ಮಾಡುವ ಕೆಲಸದಿಂದ ಬರುವ ಆದಾಯದ ಬಗ್ಗೆ ಮಾತ್ರ. ಇನ್ನು ನೀವು ಪ್ರತಿಯೊಂದು ಸೈಟ್ ನಲ್ಲಿ ಕೊಡಲಾಗುವ ನಿಮ್ಮದೇ ಆದ ಪ್ರತ್ಯೇಕ Referrer Link ಮೂಲಕ ನಿಮ್ಮ ಸ್ನೇಹಿತರನ್ನು, ಇತರರನ್ನು ಸೇರಿಸಿದರೆ, ಅವರು ಮಾಡುವ ಕೆಲಸದಲ್ಲೂ ನಿಮಗೆ 50% - 100% ಕಮಿಷನ್ ಸಿಗುತ್ತದೆ. ನಿಮ್ಮ ಕೆಳಗೆ ನೀವು 20 ಜನರನ್ನು ಸೇರಿಸಿದರೆ, 1 ಜಾಹಿರಾತಿಗೆ .15 Cent ಎಂದು ಹಿಡಿದರೆ ನಿಮ್ಮ ಆದಾಯದ ಚಿತ್ರಣ ಕೆಳಗಿನಂತಿರುತ್ತದೆ.
ಸಧ್ಯ ನಾನು ತಿಂಗಳಿಗೆ 300 ರಿಂ 350 ಡಾಲರ ಪಡೆಯುತ್ತಿದ್ದೇನೆ, ಹಾಗೂ ದಿನದಿಂದ ದಿನಕ್ಕೆ ಇದು ಜಾಸ್ತಿಯಾಗುತ್ತಲೇ ಇದೇ. ನೆನಪಿನಲ್ಲಿಡಬೇಕಾದ ಒಂದು ಪ್ರಮುಖ ಅಂಶವೇನೆಂದರೆ, 'ಕೇವಲ 1 Cent' ಎಂದು ನೀವು ಯಾವತ್ತೂ ಯೋಚಿಸಬೇಡಿ. ಇಲ್ಲಿ ಅರ್ದ Cent - 1 Cent ಕೂಡ ತುಂಬಾ Important. ಹನಿ ಹನಿ ಕೂಡಿದರೆ ಹಳ್ಳ ಎನ್ನುತ್ತಾರಲ್ಲ ಹಾಗೆ ಅರ್ದ Cent - 1 Cent ಸೇರಿ ಡಾಲರ್ ಆಗುತ್ತವೆ.

ಹಣ ಪಡೆಯುವುದು :
ಇವೆಲ್ಲ ಸೈಟ್ ಗಳಿಗೆ ನೀವು Join ಆಗುವ ಮೊದಲು ನೀವು http://www.ptc-ppc-ptr.blogspot.com/ ಬ್ಲಾಗ್ ಬಲಗಡೆಯ Sidebar ನಲ್ಲಿರುವ AlertPay, PayPal ಹಾಗೂ Libertyreserve ಬ್ಯಾನರ್ ಗಳನ್ನು ಕ್ಲಿಕ್ ಮಾಡಿ ಸೈಟ್ ಪ್ರವೇಶ ಪಡೆದು ಅಲ್ಲಿ ನಿಮ್ಮ ಬಗ್ಗೆ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಮೆಂಬರ್ ಆಗಿ. ಇವು ಮೂರೂ ಪ್ರಮುಖ ಆನ್ ಲೈನ್ ಬ್ಯಾಂಕ್ ಗಳು. ನಿಮ್ಮ ಎಲ್ಲ PTC - PTR ವೆಬ್ ಸೈಟ್ ಗಳು ಬ್ಯಾಂಕ್ ಗಳ ಜೊತೆ ಒಪ್ಪಂದ ಮಾಡಿಕೊಂಡಿರುತ್ತವೆ. ನಿಮ್ಮ ಸೈಟ್ ನಲ್ಲಿ 1 - 2 - 3 ಡಾಲರ್ ಒಟ್ಟುಗೂಡಿದ ಮೇಲೆ ಹಣವನ್ನು ಆನ್ಲೈನ್ ಬ್ಯಾಂಕ್ ಗಳಿಗೆ Transfer ಮಾಡಿ. ನಂತರ ಇಲ್ಲಿಂದ ನಿಮ್ಮ ಲೋಕಲ್ ಬ್ಯಾಂಕ್ ಗೆ Transfer ಮಾಡಬಹುದು. Online ಬ್ಯಾಂಕ್ ಗಳಿಗೆ ನೀವು ಒಂದು ಪ್ರತ್ಯೇಕ -ಮೇಲ್ ID ಕ್ರಿಯೇಟ್ ಮಾಡಿಕೊಳ್ಳುವುದು ಒಳ್ಳೆಯದು. ನಾನು ಇಲ್ಲಿ ಹೇಳಿರುವುದು ನಿಮಗೆ ಸರಿಯಾಗಿ ಅರ್ಥ ಆಗಿದೆ ಅಂದುಕೊಂಡಿದ್ದೇನೆ. ಆದರೂ ನಿಮಗೆ ಸಂಶಯ ಇದ್ದರೆ ನನಗೆ ಮೇಲ್ ಮಾಡಿ ಅಥವಾ ಕರೆ ಮಾಡಿ.
-
ಸುಭಾಷ್ ಪಾಟೀಲ್

ಪ್ರಮುಖ
ಸೂಚನೆಗಳು :
} ಒಂದು ಕಂಪ್ಯೂಟರ್ ನಿಂದ ಒಂದು ಅಕೌಂಟ್ ಮಾತ್ರ ಹೊಂದಬಹುದು.
} ಎಲ್ಲ ಸೈಟ್ ಗಳಿಗೆ G-Mail ಬಳಸಬೇಕು.
} ಪ್ರತಿದಿನ ಸೈಟ್ ಗಳಿಗೆ Login ಆಗಿ Ads ಕ್ಲಿಕ್ ಮಾಡಬೇಕು.
} ಮೊದಲು ಒಂದು ತಿಂಗಳು ನಿಮಗೆ ತುಂಬ ಬೇಸರ ಆಗುತ್ತದೆ, ದುಡ್ಡು ಕೂಡ ನಿಮಗೆ ಖುಷಿ ನೀಡುವಷ್ಟು ಸಿಗುವುದಿಲ್ಲ. ಆದರೆ ಬರ ಬರುತ್ತಾ ನಿಮ್ಮ ಆದಾಯ ನೀವೇ ನಂಬಲಾರದಷ್ಟು ಹೆಚ್ಚುತ್ತದೆ.
} ನೀವು ಸೈಟ್ ಗಳಿಗೆ Register ಮಾಡುವಾಗ Referrer ................ ನಲ್ಲಿ ನನ್ನ ಬ್ಲಾಗ್ ನಲ್ಲಿನ ಬ್ಯಾನರ್ ಮೇಲೆ ಇರುವ ಹೆಸರು ಹಾಕಿ.

E-Mail : sonu.ptc4all@gmail.com

Phone : 9481931677

Monday, May 11, 2009

V ಅಂದ್ರೆ VICTORY !

ಈಗ ದಿನನಿತ್ಯ ಟೀವಿ,ಪೇಪರ್ ಗಳಲ್ಲಿ ನಮ್ಮ ರಾಜಕಾರಣಿಗಳು ಹೀಗೆ ಬೆರಳು ತೋರಿಸುವುದನ್ನು ನೀವು ನೋಡಿರಬಹುದು.ವಿಜಯದ ಸಿಂಬಲ್ ಯಾವುದು? 'V' ಆಕಾರದಲ್ಲಿ ಬೆರಳು ಮಾಡಿ ತೋರಿಸುವುದು 'V' ಆಕಾರವನ್ನೇ ಆದ್ರೇ ನಂಬಿ ಇದೇ V ಸಿಂಬಲ್ ಮೊದಮೊದಲು ಇನ್ಸಲ್ಟ್ ಸಿಂಬಲ್ ಆಗಿತ್ತು.
ಎರಡನೇ ಮಹಾಯುದ್ಧ ಆಯ್ತಲ್ಲ,ಆಗ ಬ್ರಿಟನ್ ಪ್ರಧಾನಿ ಚರ್ಚಿಲ್ ತಮ್ಮ ಪಾಳಯದ ಗೆಲುವನ್ನು ಸೂಚಿಸಲು V ಸಿಂಬಲ್ ಬಳಸಿದ್ದ. ಚರ್ಚಿಲ್ ನಿಂದಲೇ V ಸಿಂಬಲ್ ಗೆ ವಿಶ್ವದಾದ್ಯಂತ ಮಾನ್ಯತೆ ಸಿಕ್ಕಿದ್ದು.ತನ್ನ ಕಡೆಯ ಸೈನಿಕರನ್ನು ಉತ್ತೇಜಿಸಲು ಚರ್ಚಿಲ್ V ಸಿಂಬಲ್ ಬಳಸಿಕೊಂಡ.ಹಾಗೇನೇ ಅದನ್ನು ವಿರೋದಿ ಪಡೆಗಳಿಗೆ 'ಗೇಲಿ' ಮಾಡುವದಕ್ಕೂ ಬಳಸಿಕೊಂಡಿದ್ದನಂತೆ.
ಸಿಂಬಲ್ ಇದೆಯಲ್ಲ,ಇದನ್ನು ಶತಮಾನಗಳ ಹಿಂದೆಯಿಂದಲೂ INSULT,SHAMEFUL ಅನ್ನೋ ಅರ್ಥದಲ್ಲೇ ಬಳಸಿದ್ದರು. V ಅಂದರೆ ಎರಡು ಅನ್ನೋ ಅರ್ಥವೂ ಸಿಕ್ಕುತ್ತದೆ.ನಮ್ಮ ಕಡೆ ಬೆಳಿಗ್ಗೆ ಎದ್ದು V ಆಕಾರದಲ್ಲಿ ಬೆರಳು ತೋರಿಸಿದರೆ ಬಹಿರ್ದೆಶೆಗೆ ಹೋಗಿ ಬರ್ತೀನಿ ಅನ್ನುವ ಅರ್ಥ ಇರೋದು ನಿಮಗೆ ಗೊತ್ತಲ್ಲ?
VICTORY ಅನ್ನೋ ಪದ ಫ್ರೆಂಚ್ VICTOIRE ಮತ್ತು ಫ್ಲೆಮಿಶ್ VRIJBEIAL ಪದಗಳಿಂದ ಸಂಯೋಜಕವಾಗಿದ್ದು, ಗೆದ್ದಾಗೊಮ್ಮೆ ಕೈಯತ್ತಿ V ಆಕಾರದಲ್ಲಿ ಬೆರಳು ತೋರಿಸಿ ನೋಡಿ ಅದರ ಖುಷಿಯೇ ಬೇರೆ.

ಜಗತ್ತಿನ ಪರಮ ಪಾತಕಿಗಳು

ಇಲ್ಲಿ ನಾನು ಹೇಳಬಯಸಿರುವುದು ಯಾರೋ ಅಪ್ಪಟ ಕ್ರಿಮಿನಲ್ ಗಳ ಕಥೆಯನ್ನಲ್ಲ, ನಾವು ಚಿಕ್ಕವರಿದ್ದಾಗಿನಿಂದಲೇ ನಮಗೆ ಪರಿಚಯವಾಗಿರುವ ಜಗತ್ತಿನ ಮಹಾನ್ ನಾಯಕರು,ಮೇಧಾವಿಗಳು,ಸಾಧಕರ ಬಗ್ಗೆ.ಅವರ ಇನ್ನೊಂದು ಮುಖವನ್ನು ನಮಗೆ ನಮ್ಮ ಸ್ಕೂಲಿನಲ್ಲಿ ಪರಿಚಯಿಸೇ ಇಲ್ಲ,ಅದಕ್ಕಾಗಿ ನನ್ನ ಪ್ರಯತ್ನ.

ರಾಕ್ಷಸ ರೂಪಿ ಹಿಟ್ಲರ್:
ಇಡೀ ಮಾನವ ಜನಾಂಗ ಕಂಡ ಅತ್ಯಂತ ಕ್ರೂರ ವ್ಯಕ್ತಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವನೇ ಅಡಾಲ್ಫ್ ಹಿಟ್ಲರ್.ಕರುಣೆ,ಮಾನವೀಯತೆ,ಅನುಕಂಪ ಇಂಥ ಪದಗಳ ಪರಿಚಯವೇ ಇಲ್ಲದ ಹಿಟ್ಲರ್,ಇಡೀ ಜಗತ್ತನ್ನೇ ತನ್ನ ನಿರ್ಧಯತೆಯಿಂದ ನಡುಗಿಸಿದವನು.
ಬರೀ ಜರ್ಮನಿಯನ್ನಷ್ಟೇ ಅಲ್ಲದೆ ಇಡೀ ಜಗತ್ತನ್ನೇ ಆಳಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದ ಹಿಟ್ಲರ್ ಪ್ರಪಂಚದ ಮಹಾಯುದ್ಧಗಳಿಗೆ ಕಾರಣನಾದನು.ಇವನು ಸರ್ವಾಧಿಕಾರಿಯಾಗಿ ಜರ್ಮನಿಯಲ್ಲಿ ಆಡಳಿತ ನಡೆಸಿದ್ದು ಕೇವಲ ಹನ್ನೆರಡು ವರ್ಷವಾದರೂ ಹನ್ನೆರಡು ದಶಕಗಳವರೆಗೆ ನೆನಪಿರುವಷ್ಟು ಕ್ರೌರ್ಯ ಎಸಗಿಬಿಟ್ಟ.
ಸಲಿಂಗಕಾಮಿಯು ಆಗಿದ್ದ ಹಿಟ್ಲರ್ ಅದೆಷ್ಟೋ ಜನರನ್ನು ತನ್ನ ವಿಕ್ರತಕ್ಕೆ ಬಳಸಿಕೊಂಡ ನಿದರ್ಶನಳು ಸಿಕ್ಕಿವೆ. ಜಗತ್ತಿನಲ್ಲಿ ಜರ್ಮನ್ನರು ಸರ್ವಶ್ರೇಷ್ಟರು,ಆಳಲು ಎಂದೇ ಹುಟ್ಟಿದವರು ಎಂದು ಬಲವಾಗಿ ಪ್ರತಿಪಾದಿಸುತಿದ್ದ ಹಿಟ್ಲರ್,ಉಳಿದವರೆಲ್ಲ ಜರ್ಮನ್ನರ ಸೇವೆ ಮಾಡಬೇಕೆಂದು ವಾದಿಸುತ್ತಿದ್ದ.ಯುದ್ಧದಲ್ಲಿ ಸೆರೆಸಿಕ್ಕವರನ್ನು ಅದೆಷ್ಟು ವಿಧದಲ್ಲಿ ಚಿತ್ರಹಿಂಸೆ ಮಾಡಿದನೆಂದರೆ,ಪ್ರಪಂಚ ಹಿಟ್ಲರನ ವಿಲಕ್ಷಣ ಕ್ರೌರ್ಯಕ್ಕೆ ನಡುಗಿಹೋಯಿತು.
ಇವನ ಆಡಳಿತ ಅವಧಿಯಲ್ಲಿ ಅದೆಷ್ಟೋ ಸಾವಿರ ಅಮಾಯಕರ ಧಾರುಣ ಹತ್ಯೆಯಾಯಿತು.ಚಿತ್ರವಿಚಿತ್ರ ಹಿಂಸೆಗೆ ಗುರಿಮಾಡಿ ಕೊಳ್ಳುತ್ತಿದ್ದರಿಂದ ಸಿಕ್ಕ ಹೆಣಗಳನ್ನು ನೋಡಿದ ಜನ ಭೀತಿಯಿಂದ ತತ್ತರಿಸುತಿದ್ದರು.ಶೀಲಹರಣಕ್ಕೆ ಒಳಗಾಗಿ ಕೊಲ್ಲಲ್ಪಡುತಿದ್ದ ಹೆಣ್ಣು ಮಕ್ಕಳ ಹೆಣಗಳು ನೋಡಲು ಭಯ ಹುಟ್ಟಿಸುತ್ತಿದ್ದವು. ಮಹಾನಗರಗಳನ್ನು ನಿರಂತರವಾಗಿ-ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿತ್ತು.ಒಟ್ಟಿನಲ್ಲಿ ಪ್ರಪಂಚ ಜನ್ಮ ತಳೆದಾಗಿನಿಂದ ಇದುವರೆಗೆ ಹಿಟ್ಲರ್ ನಂಥ ಕ್ರೂರಿಗಳನ್ನು ಯಾರೂ ನೋಡಿಲ್ಲ.

Sunday, May 10, 2009

ಸಾವಿನ ಪ್ರತಿನಿಧಿ ಸದ್ದಾಮ್!


ವಿಸ್ತಿರ್ಣದಲ್ಲಿ ನಮ್ಮ ಪಂಜಾಬ್ ರಾಜ್ಯಕ್ಕಿಂತ ಚಿಕ್ಕದಾಗಿರುವ ಇರಾಕ್ ದೇಶ ಇಡೀ ಜಗತ್ತಿಗೆ ಪರಿಚಯವಾಗಲು ಪ್ರಮುಖ ಕಾರಣ, ಅಲ್ಲಿರುವ ತೈಲ ನಿಕ್ಷೇಪಗಳು.ಪೆಟ್ರೋಲ್ ಮತ್ತು ಡಿಸೇಲ್ ಎಲ್ಲರಿಗೂ ಅತ್ಯವಶ್ಯ,ಅದಕ್ಕಾಗಿ ಎಲ್ಲ ದೇಶದವರು ನಮ್ಮ ಮುಂದೆ ಮೊಣಕಾಲೂರಿ ಕೂಡಲೇಬೇಕು ಎಂಬುದು ಸದ್ದಾಮ್ ಉದ್ದೇಶವಾಗಿತ್ತು.ಅಹಂ ಮತ್ತು ದುಡ್ಡಿನ ಮಧದಿಂದ ಕೊಬ್ಬಿ ಹೋಗಿದ್ದ ಸದ್ದಾಮ್ ಯಾರನ್ನು ಕೇರ್ ಮಾಡುತ್ತಿರಲಿಲ್ಲ.ಅಮೆರಿಕವನ್ನೇ ಎದುರು ಹಾಕಿಕೊಂಡು ನಿರಂತರವಾಗಿ ಮೂರು ತಿಂಗಳ ಅದರೊಂದಿಗೆ ಯುದ್ದಕ್ಕಿಳಿದ.
ತನಗಾಗದವರನ್ನು ಯಾವತ್ತೂ ಅವನು ಜೀವಂತ ಉಳಿಸಲಿಲ್ಲ.ಅವನ ಅಧಿಕಾರ ಅವಧಿಯಲ್ಲಿ ಸಾಮೂಹಿಕ ಹತ್ಯೆಗಳ ಸರಮಾಲೆಗಳೇ ನಡೆದು ಹೋದವು.ಯಾರ ಮೇಲಾದರೂ ಸ್ವಲ್ಪೇ ಸ್ವಲ್ಪ ಡೌಟ್ ಬಂದರೂ,ಸದ್ದಾಂ ಅಂತವರನ್ನು ಶಾಶ್ವತವಾಗಿ ಜೈಲಿಗೆ ದೂಡಿಬಿಡುತ್ತಿದ್ದ.ಈ ಅವಧಿಯಲ್ಲಿ ಲೆಕ್ಖವಿಲ್ಲದಷ್ಟು ಜನ 'ಕಣ್ಮರೆಯಾದರು'.ತನ್ನ ದೇಶದ ನಾಗರಿಕರನ್ನಷ್ಟೇ ಅಲ್ಲದೇ ಅಕ್ಕಪಕ್ಕದ ದೇಶದವರನ್ನೂ ಸದ್ದಾಮ್ ನಿರ್ಧಯವಾಗಿ ಕೊಲ್ಲಿಸುತ್ತಿದ್ದ.ಇರಾಕ್ ನ ನೆರೆ ರಾಷ್ಟ್ರವಾದ ಕರ್ಧಿಶ್ ನ ಇಪ್ಪತ್ತು ಸಾವಿರ ಜನರನ್ನು ಅತ್ಯಂತ ಅಮಾನುಷವಾಗಿ ಸದ್ದಾಮ್ ಕೊಲ್ಲಿಸಿದ.
ಕ್ರೂರತನದಲ್ಲಿ ಅಡಾಲ್ಫ್ ಹಿಟ್ಲರ್ ನ ಸೋದರನಿಂತಿದ್ದ ಸದ್ದಾಮ್ ಹುಸೇನ್ ನನ್ನು ಅಮೆರಿಕದ ಸೇನೆ ಬಂದಿಸುವ ಮೂಲಕ ಅವನ ಹೀನ ಅಧ್ಯಾಯ ಅಂತ್ಯಗೊಂಡಿತು.೨೦೦೭ ರ ಮಾರ್ಚ್ ತಿಂಗಳಲ್ಲಿ ಅಮೆರಿಕಾದಿಂದ ಮರಣ ದಂಡನೆಗೆ ಈಡಾಗಿ ಸದ್ದಾಮ್ ಕೊನೆಯುಸಿರೆಳೆದಾಗ ಭಾರತವೂ ಸೇರಿದಂತೆ ಹಲವು ರಾಷ್ಟ್ರ ಗಳಲ್ಲಿನ ಮುಸ್ಲೀಮರು ಅಮೆರಿಕದ ವಿರುದ್ದ ಪ್ರತಿಭಟನೆ ಮಾಡಿದರು.ಆದರೆ ಇರಾಕ್ ಜನ ಮಾತ್ರ ಸದ್ದಾಮ್ ಸತ್ತ ಸುದ್ದಿ ಕೇಳಿ ಸಂಬ್ರಮದಿಂದ ಕುಣಿದಾಡಿದರು!

ನಿರ್ಧಯ ಹಂತಕ ಸ್ಟಾಲಿನ್ !


ಸ್ಟಾಲಿನ್ ರಷ್ಯಾದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದೇ ಇಷ್ಟು ದಿನ ನಮಗೆಲ್ಲ ಗೊತ್ತು, ಆತನೊಬ್ಬ ವೀರ - ಧೀರ,ಪ್ರಚಂಡ ಬುದ್ದಿವಂತ,ಮಹಾನ್ ರಾಜನೀತಿಜ್ಞ ಎಂದು ನಮಗೆ ಸುಳ್ಳು ಸುಳ್ಳೇ ಹೇಳಲಾಗಿದೆ.ಎಲ್ಲ ಕ್ಷೇತ್ರದಲ್ಲೂ ಏಕ್ದಂ ಬದಲಾವಣೆ ತಂದು ಬಿಡಬೇಕು ಎಂದು ಸ್ಟಾಲಿನ್ ಬಯಸಿದ್ದು ನಿಜ.ಆದರೆ ತನ್ನ ನೀತಿ ನಿಯಮಗಳನ್ನು ಯಾರಾದರು ಒಪ್ಪದಿದ್ದರೆ ಅವರನ್ನು ನಿರ್ಧಯವಾಗಿ ಜೈಲಿಗೆ ದೂಡಿಬಿಡುತ್ತಿದ್ದ ಅವನನ್ನು ಟೀಕಿಸಿದವರು ಜೈಲಿಗೆ ಹೋದರು ಎಂಬುದಷ್ಟೇ ಜನರಿಗೆ ಗೊತ್ತಾಗುತ್ತಿತ್ತು.ಮುಂದೆ ಅವರು ಎಂತಹ ಚಿತ್ರಹಿಂಸೆಗೆ ಒಳಪಡುತ್ತಿದ್ದರು,ಅದೆಂಥ ದಾರುಣ ಸಾವನ್ನು ಸಾಯುತ್ತಿದ್ದರು ಎಂಬುದು ಹೊರಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ.ತನ್ನ ವಿರುದ್ಧ ದನಿ ಎತ್ತಿದವರಿಗೆ ದೇಶಬ್ರಷ್ಟನ ಪಟ್ಟ ಕಟ್ಟುತ್ತಿದ್ದ.ಅವರ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ದೇಶದಿಂದಲೇ ಓಡಿಸಿಬಿದುತ್ತಿದ್ದ.ತನ್ನ ಆಡಳಿತದ ಅವಧಿಯಲ್ಲಿ ೨೦ ದಶ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಅವನು ಬಲವಂತವಾಗಿ ನಾಡಿನಿಂದ ಹೊರ ದಬ್ಬಿದ ಹಾಗೂ ಅಷ್ಟೇ ಜನರ ಕೊಲೆಗಳೂ ನಡೆದುಹೋದವು.ಸುಮಾರು ಹತ್ತು ದಶ ಲಕ್ಷ ಜನರನ್ನು ಅಜೀವಪರ್ಯಂತ ಕಾರಾಗ್ರಹದಲ್ಲಿ ಇಡಲಾಗಿತ್ತು.ಅಂದರೆ ಸ್ಟಾಲಿನ್ ಸುಮಾರು ಮೂವತ್ತು ದಶ ಲಕ್ಷ ಮರ್ಡರ್ ಮಾಡಿಸಿದ.ಇಂತವನನ್ನು ನಮ್ಮ ಇತಿಹಾಸಕಾರರು ಉಕ್ಕಿನ ಮನುಷ್ಯ,ಕ್ರಾಂತಿಯ ಹರಿಕಾರ ಎಂದಷ್ಟೇ ಹೇಳಿ ನಮ್ಮ ದಾರಿ ತಪ್ಪಿಸಿಬಿಟ್ಟರು,ಅಲ್ವಾ?