Sunday, May 10, 2009

ನಿರ್ಧಯ ಹಂತಕ ಸ್ಟಾಲಿನ್ !


ಸ್ಟಾಲಿನ್ ರಷ್ಯಾದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದೇ ಇಷ್ಟು ದಿನ ನಮಗೆಲ್ಲ ಗೊತ್ತು, ಆತನೊಬ್ಬ ವೀರ - ಧೀರ,ಪ್ರಚಂಡ ಬುದ್ದಿವಂತ,ಮಹಾನ್ ರಾಜನೀತಿಜ್ಞ ಎಂದು ನಮಗೆ ಸುಳ್ಳು ಸುಳ್ಳೇ ಹೇಳಲಾಗಿದೆ.ಎಲ್ಲ ಕ್ಷೇತ್ರದಲ್ಲೂ ಏಕ್ದಂ ಬದಲಾವಣೆ ತಂದು ಬಿಡಬೇಕು ಎಂದು ಸ್ಟಾಲಿನ್ ಬಯಸಿದ್ದು ನಿಜ.ಆದರೆ ತನ್ನ ನೀತಿ ನಿಯಮಗಳನ್ನು ಯಾರಾದರು ಒಪ್ಪದಿದ್ದರೆ ಅವರನ್ನು ನಿರ್ಧಯವಾಗಿ ಜೈಲಿಗೆ ದೂಡಿಬಿಡುತ್ತಿದ್ದ ಅವನನ್ನು ಟೀಕಿಸಿದವರು ಜೈಲಿಗೆ ಹೋದರು ಎಂಬುದಷ್ಟೇ ಜನರಿಗೆ ಗೊತ್ತಾಗುತ್ತಿತ್ತು.ಮುಂದೆ ಅವರು ಎಂತಹ ಚಿತ್ರಹಿಂಸೆಗೆ ಒಳಪಡುತ್ತಿದ್ದರು,ಅದೆಂಥ ದಾರುಣ ಸಾವನ್ನು ಸಾಯುತ್ತಿದ್ದರು ಎಂಬುದು ಹೊರಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ.ತನ್ನ ವಿರುದ್ಧ ದನಿ ಎತ್ತಿದವರಿಗೆ ದೇಶಬ್ರಷ್ಟನ ಪಟ್ಟ ಕಟ್ಟುತ್ತಿದ್ದ.ಅವರ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ದೇಶದಿಂದಲೇ ಓಡಿಸಿಬಿದುತ್ತಿದ್ದ.ತನ್ನ ಆಡಳಿತದ ಅವಧಿಯಲ್ಲಿ ೨೦ ದಶ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಅವನು ಬಲವಂತವಾಗಿ ನಾಡಿನಿಂದ ಹೊರ ದಬ್ಬಿದ ಹಾಗೂ ಅಷ್ಟೇ ಜನರ ಕೊಲೆಗಳೂ ನಡೆದುಹೋದವು.ಸುಮಾರು ಹತ್ತು ದಶ ಲಕ್ಷ ಜನರನ್ನು ಅಜೀವಪರ್ಯಂತ ಕಾರಾಗ್ರಹದಲ್ಲಿ ಇಡಲಾಗಿತ್ತು.ಅಂದರೆ ಸ್ಟಾಲಿನ್ ಸುಮಾರು ಮೂವತ್ತು ದಶ ಲಕ್ಷ ಮರ್ಡರ್ ಮಾಡಿಸಿದ.ಇಂತವನನ್ನು ನಮ್ಮ ಇತಿಹಾಸಕಾರರು ಉಕ್ಕಿನ ಮನುಷ್ಯ,ಕ್ರಾಂತಿಯ ಹರಿಕಾರ ಎಂದಷ್ಟೇ ಹೇಳಿ ನಮ್ಮ ದಾರಿ ತಪ್ಪಿಸಿಬಿಟ್ಟರು,ಅಲ್ವಾ?

No comments:

Post a Comment